ಕಂಪಾಲ
Kampala | |
---|---|
![]() Montage of various landmarks in Kampala, Uganda. | |
Coordinates: 00°18′49″N 32°34′52″E / 0.31361°N 32.58111°E | |
Country | Uganda |
City | Kampala |
Government | |
• Lord Mayor | Erias Lukwago |
• Executive Director | Dorothy Kisaka[೧] |
Area | |
೧೮೯ km2 (೭೩ sq mi) | |
• Land | ೧೭೬ km2 (೬೮ sq mi) |
• Water | ೧೩ km2 (೫ sq mi) |
• Metro | ೮,೪೫೧.೯ km2 (೩೨೬೩.೩ sq mi) |
Elevation | ೧,೨೦೦ m (೩೯೦೦ ft) |
Population (2019) | |
೧೬,೫೦,೬೦೦[೨] | |
• Metro | ೬೭,೦೯,೯೦೦[೨] |
Demonyms | Munakampala |
Time zone | UTC+3 (EAT) |
Website | www |
ಕಂಪಾಲ : ಪೂರ್ವ ಆಫ್ರಿಕದಲ್ಲಿರುವ ಉಗಾಂಡ ದೇಶದ ರಾಜಧಾನಿ; ಅಲ್ಲಿಯ ಅತ್ಯಂತ ದೊಡ್ಡ ನಗರ, ಬುಗಾಂಡ ಪ್ರಾಂತ್ಯದಲ್ಲಿ ಎನ್ಟೆಬ್ಬೆಗೆ ಉತ್ತರಕ್ಕೂ ಈಶಾನ್ಯಕ್ಕೂ ನಡುವೆ 34 ಕಿಮೀ ದೂರದಲ್ಲಿ ವಿಕ್ಟೋರಿಯ ಸರೋವರದ ದಡದ ಮೇಲಿದೆ. ಈ ನಗರದ ವಿಸ್ತೀರ್ಣ 22 ಚ.ಕಿಮೀ ಜನವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳು ಪ್ರತ್ಯೇಕವಾಗಿವೆ. ಮುಖ್ಯ ರಸ್ತೆಯ ಉದ್ಧ 8 ಕಿಮೀ ಇದರ ಮಧ್ಯದಲ್ಲಿ ಇರುವ ಪುರಭವನವನ್ನು ಕಟ್ಟಿಸಿದಾತ (1950) ಒಬ್ಬ ಭಾರತೀಯ ವ್ಯಾಪಾರಿ. ಸರ್ಕಾರಿ ಭವನವೂ ಕೆಲವು ಸಚಿವಾಲಯಗಳೂ ಎನ್ಟೆಬ್ಬೆಯಲ್ಲಿವೆ. ಇತರ ಖಾತೆಗಳೂ ಸರ್ಕಾರಿ ಕಚೇರಿಗಳೂ ಇರುವುದು ಕಂಪಾಲದಲ್ಲಿ. ವಿಧಾನ ಪರಿಷತ್ತಿನ ಅಧಿವೇಶನ ನಡೆಯುವುದೂ ಸಂಸದೀಯ ಭವನ ಇರುವುದೂ ಇಲ್ಲೇ, ಮುಖ್ಯರಸ್ತೆಯ ಎರಡು ಪಕ್ಕಗಳಲ್ಲೂ ಹಿಂದೆ ಇದ್ದ ಹಳೆಯ ಭಾರತೀಯ ಮಳಿಗೆಗಳಿಗೆ ಬದಲಾಗಿ ಈಗ ಹೊಸ ಭವನಗಳು ಎದ್ದಿವೆ. ಉಗಾಂಡದ ವಿದ್ಯುಚ್ಛಕ್ತಿ ಮಂಡಳಿಯ ಭವನ (ಅಂಬರ್ ಹೌಸ್), ಲಿಂಟ್ ಮಾರುಕಟ್ಟೆ ಮತ್ತು ಕಾಫಿ ಮಂಡಲಿಯ ಭವನಗಳು ಉದಾಹರಣೆಗಳು. ಉಗಾಂಡದ ವಸ್ತುಸಂಗ್ರಹಾಲಯ ಮತ್ತು ನ್ಯಾಯಾಲಯಗಳು ಹಳೆಯ ಮಾದರಿಯ ಕಟ್ಟಡಗಳಲ್ಲಿಯೇ ಇವೆ. 1952ರಲ್ಲಿ ವಸ್ತುಸಂಗ್ರಹಾಲಯವನ್ನು ಹೊಸದಾಗಿ ಕಟ್ಟಲಾಯಿತು. ಕಂಪಾಲದಲ್ಲಿ ಅನೇಕ ಮಸೀದಿಗಳು, ದೇವಾಲಯಗಳು, ಚರ್ಚುಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ಜ್ಯೂಬಿಲಿ ಉದ್ಯಾನ, ಕ್ರೀಡಾಂಗಣ ಮುಂತಾದುವೂ ಇವೆ. ಕಂಪಾಲದ ಬಾನುಲಿ ಕೇಂದ್ರ ಇರುವುದು ಬುಗೋಲೋಬಿ ಬೆಟ್ಟದ ಮೇಲೆ ಒಂದು ವಿಶ್ವವಿದ್ಯಾನಿಲಯವಿದೆ.
ಕಂಪಾಲ ಉಗಾಂಡದ ಮುಖ್ಯರಸ್ತೆ, ರೈಲ್ವೆ, ಜಲಮಾರ್ಗ ಮತ್ತು ವಾಯುಮಾರ್ಗಗಳ ಕೇಂದ್ರ. ಇಲ್ಲಿಯ ಜನಸಂಖ್ಯೆ 1,659,600 (2011).
ಉಲ್ಲೇಖಗಳು
[ಬದಲಾಯಿಸಿ]

- Pages using gadget WikiMiniAtlas
- Pages with script errors
- Pages with non-numeric formatnum arguments
- Pages using the JsonConfig extension
- Articles with short description
- Short description is different from Wikidata
- Coordinates on Wikidata
- Pages using infobox settlement with infobox mapframe errors
- Pages using infobox settlement with no map
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ನಗರಗಳು
- ಆಫ್ರಿಕಾ ಖಂಡ